ಕಿರುತೆರೆಯ ಸ್ಟಾರ್ ನಿರ್ದೇಶಕ ಟಿ ಎನ್ ಸೀತಾರಾಂ 'ಮೀರಾ ಮಾಧವ ರಾಘವ' ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ಈ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೇ ಹೋಗಿದ್ದೆ. ನೋಡಿ ನಿರಾಶೆಯಾಯಿತು. ಭಾನುವಾರದ ಪತ್ರಿಕೆಗಳನ್ನು ನೋಡಿದರೆ ಪ್ರಜಾವಾಣಿ ಹೊರತು ಪಡಿಸಿದರೆ ಉಳಿದೆಲ್ಲಾ ಪತ್ರಿಕೆಗಳೂ ಚಿತ್ರವನ್ನು ವಾಚಾಮಗೋಚರವಾಗಿ ಹೊಗಳಿವೆ. ಸಂಪದದಲ್ಲೂ ಹೊಗಳಿಕೆಗಳೇ ತುಂಬಿರುವ ಎರಡು ಲೇಖನಗಳು. ಅಂಥದ್ದೇ ಪ್ರತಿಕ್ರಿಯೆಗಳು. ನಾನು ಸಿನಿಮಾ ನೋಡುವುದರಲ್ಲಿಯೇ ಏನೋ ತಪ್ಪಿದೆ ಎಂದುಕೊಂಡು ನನ್ನ ಜತೆ ಸಿನಿಮಾಕ್ಕೆ ಬಂದಿದ್ದ ನಾಲ್ಕೈದು ಮಂದಿ ಗೆಳೆಯರನ್ನು ಕೇಳಿದೆ. ಅವರೂ "ಸಿನಿಮಾ ಚೆನ್ನಾಗಿಲ್ಲ" ಎಂದರು.
'ಮೀರಾ ಮಾಧವ ರಾಘವ' ಸಿನಿಮಾದಲ್ಲಿ ಚೆನ್ನಾಗಿರುವುದು ಎರಡು ಅಂಶಗಳು. ಒಂದು ಎಚ್ ಎಂ ರಾಮಚಂದ್ರ ಅವರ ಛಾಯಾಗ್ರಹಣ ಮತ್ತೊಂದು ರಮ್ಯಾ ಅಭಿನಯ. ಈ ಎರಡನ್ನು ಹೊರತು ಪಡಿಸಿದರೆ ಈ ಚಿತ್ರದಲ್ಲಿ ಚೆನ್ನಾಗಿದೆ ಎಂದು ಹೇಳುವ ಅಂಶಗಳನ್ನು ಸಂಶೋಧಿಸಿ ಕಂಡು ಹಿಡಿಯಬೇಕಾಗುತ್ತದೆ.
ಟಿ. ಎನ್. ಸೀತಾರಾಂ ಅವರು ಒಳ್ಳೆಯ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮುಖ್ಯವಾಹಿನಿಯ ಸಿನಿಮಾ ಒಂದಕ್ಕೆ ಬೇಕಿರುವ ಎಲ್ಲಾ ಮಸಾಲೆಗಳೂ ಕತೆಯಲ್ಲಿವೆ. ಕತೆಯನ್ನು ಸಿನಿಮಾ ಮಾಡುವಾಗ ಎಡವಟ್ಟಾಗಿದೆ. ಆ ಎಡವಟ್ಟುಗಳನ್ನು ಪಟ್ಟಿ ಮಾಡುತ್ತಾ ಹೋಗುವುದಕ್ಕೆ ನನಗೇನೇನೂ ಉತ್ಸಾಹವಿಲ್ಲ. ಪ್ರಜಾವಾಣಿಯಲ್ಲಿ ಗೆಳೆಯ ರಘುನಾಥ ಚ. ಹ. ಬರೆದಿರುವ ವಿಮರ್ಶೆಯಲ್ಲಿ ಚಿತ್ರ ಯಾಕೆ ಕೆಟ್ಟದಾಗಿದೆ ಎಂಬುದಕ್ಕೆ ನಾನು ನೀಡಬಹುದಾದ ಎಲ್ಲಾ ಕಾರಣಗಳೂ ಇವೆ. ಸೀತಾರಾಂ ಕಿರುತೆರೆಯಲ್ಲಿ ಸಾಧಿಸುವ ಮ್ಯಾಜಿಕ್ ಅನ್ನು ಹಿರಿತೆರೆಯಲ್ಲೇಕೆ ಸಾಧಿಸುವುದಿಲ್ಲ ಎಂಬುದು ನನಗಿನ್ನೂ ಚೋದ್ಯವಾಗಿಯೇ ಉಳಿದಿದೆ.
-ಇಸ್ಮಾಯಿಲ್





ಅಡಿಕೆ ತೋಟ ಮಾಡುತ್ತೇನೆ
ನಾನೊಂದು ಮ್ಯಾಗಝಿನ್ ಶುರು ಮಾಡುವುದಿಲ್ಲ. ಸಾಧ್ಯವಿದ್ದರೆ ಕಾಸರಗೋಡಿನ ಸಮೀಪ ಅಡಿಕೆ ತೋಟ ಖರೀದಿಸುತ್ತೇನೆ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.in
ಉ: ಅಡಿಕೆ ತೋಟ ಮಾಡುತ್ತೇನೆ
particularly ಕಾಸರಗೋಡು ಸಮೀಪ ಯಾಕೆ? :-)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಹಿರಿತೆರೆಯಲ್ಲಿ ಕಾಣಿಸದ ಸೀತಾರಾಂ ಮ್ಯಾಜಿಕ್
ಟಿ ಎನ್ ಸೀತಾರಾಂರವರ "ಮಾಯಾಮೃಗ" ನನಗೆ ಬಹಳ ಇಷ್ಟವಾಗಿತ್ತು. ಅದಾದ ನಂತರ ಬಂದ ಅವರ ದಾರಾವಾಹಿಗಳನ್ನ ನಮ್ಮ ಮನೆಯಲ್ಲಿ ಎಲ್ಲರೂ ಕುಳಿತು ನೋಡುತ್ತಿದ್ದರಾದರೂ ನನಗೆ ಅಷ್ಟೊಂದು ರುಚಿಸಿರಲಿಲ್ಲ.
ಮಧ್ಯಮ ವರ್ಗದ ಜೀವನ, ತಲ್ಲಣಗಳು, emotions - ಸೀತಾರಾಂರವರ strength ಆಗಿತ್ತು. ಆದರೆ "ಮುಕ್ತ" ದಾರಾವಾಹಿಯಲ್ಲಿ ಅವರು ಹೆಚ್ಚಾಗಿ ಕೋರ್ಟಿನಲ್ಲಿನ ಡ್ರಮಾಟಿಕ್ ಸೀಕ್ವೆನ್ಸುಗಳಿಗೆ ಹೆಚ್ಚು ಒಲವು ತೋರಿದಂತಿತ್ತು.
ನಾವುಗಳು ಅವರ ಮನೆಗೆ ಹೋದಾಗ ಅವರು ಡಿಟೆಕ್ಟಿವ್ ಸ್ಟೋರಿ ಮಾಡಬೇಕೆಂದುಕೊಂಡಿದ್ದೇನೆ ಅಂದದ್ದು ನೆನಪು - ಆಗ ಮನಸ್ಸಿನಲ್ಲಿಯೇ ಟಿ ಎನ್ ಎಸ್ ರವರ ನಿರ್ದೇಶನ ಶೈಲಿ ಸಿನಿಮಾದಲ್ಲಿ ಹೇಗೆ ಮೂಡುವುದು ಎಂಬುದರ ವಿಶ್ಯುಯಲೈಸೇಶನ್ ನನ್ನದೇ ರೀತಿಯಲ್ಲಿ ಮಾಡಿಕೊಂಡಿದ್ದೆ. ಮತ್ತೊಮ್ಮೆ ಒಳ್ಳೆಯ ನಿರ್ದೇಶಕರ ದಂಡು ಕನ್ನಡ ಸಿನಿಮಾ ಹೊಕ್ಕುವುದು, ಕನ್ನಡ ಚಿತ್ರರಂಗವನ್ನ ಉತ್ತಮಪಡಿಸುವುದು ಎಂದುಕೊಂಡು ಖುಷಿ ಪಟ್ಟುಕೊಂಡಿದ್ದೆ. ಆದರೆ ನೀವು ಬರೆದಿರುವ review ಓದಿ ನಿರಾಶೆಯಾಯಿತು.
Having said that, ಪತ್ರಿಕೆಗಳಲ್ಲಿ ಬಂದ ರಿಪೋರ್ಟುಗಳನ್ನ ಓದಿದರೆ ಟಿ ಎನ್ ಎಸ್ ಬಹುಶಃ ಬಹಳ tight deadlineನಲ್ಲಿ ಇದ್ದರು ಎನಿಸುತ್ತದೆ. ಹೀಗಾಗಿ ಅವರಲ್ಲಿರುವ ಸೃಜನಶೀಲ ನಿರ್ದೇಶಕ ಸಂಪೂರ್ಣವಾಗಿ ಹೊರಬಂದಿಲ್ಲದಿರಬಹುದು. Maybe, it is his next film that we should all be looking forward to. :-)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಹಿರಿತೆರೆಯಲ್ಲಿ ಕಾಣಿಸದ ಸೀತಾರಾಂ ಮ್ಯಾಜಿಕ್
ಸೀತಾರಾಂ ತುಂಬಾ ಓದಿರೋರು. ತುಂಬಾ ತಿಳಿದ್ಕೊಂಡಿರೋರು. ಅವರು ದೊಡ್ಡ ವ್ಯಕ್ತಿಗಳ ಒಡನಾಟದಲ್ಲಿ ಬೆಳೆದು ಬಂದೋರು. ಹಿಂಗಿದ್ದೂ ಇಂಥಾ ಪಿಚ್ಚರ್ ಯಾಕೆ ತೆಗೆದ್ರು ಅಂತ ಅರ್ಥ ಆಗ್ತಿಲ್ಲ. ಕಥೆ ತೀರಾ ಸಾಮಾನ್ಯ ಸೆನ್ಟಿಮೆನ್ಟ್ ಡ್ರಾಮ. ಅದರ ಟ್ರೀಟ್‍ಮೆಮ್ಟ್ ಇನ್ನಾ ಸಾಮಾನ್ಯವಾಗಿತ್ತು. it was like unrealistic film shot unrealistically... ಪರಸ್ಪರ ಕ್ಯಾನ್ಸಲ್ ಆಗಿ ಪಿಚ್ಚರ್‍ನಲ್ಲಿ ಏನೂ ಇರಲಿಲ್ಲ ಅಂದಂಗಾಯ್ತು. ಪಿಚ್ಚರ್ ಅಂದ್ರೆ ಡೈಲಾಗ್ ಅಂತಾನೋ ಇಲ್ಲಾ ಪ್ರೇಕ್ಷಕರೆಲ್ಲರೂ ಹೆಡ್ಡರು ಅಂತನೋ ತಿಳ್ಕೊಂಡಂಗೆ ಪಿಚ್ಚರ್ ಇತ್ತು. ಸೀತಾರಾಂ ಅವರಿಂದ ಇದಕ್ಕಿಂತ ಹೆಚ್ಚಿನ ನಿರೀಕ್ಷೆ ಇತ್ತು. ಹಿರಿತೆರೆಯಲ್ಲಿ ಕಾಣಿಸದ ಸೀತಾರಾಂ ಮ್ಯಾಜಿಕ್ ಬೇಸರದೊಂದಿಗೆ ಕನ್ನಡ ಸಿನೆಮಾ ಇನ್ಡಸ್ಟ್ರಿಯ ಬಗ್ಗೆ ಭಯಾನೂ ಮೂಡಿಸಿತು!
ಉ: ಹಿರಿತೆರೆಯಲ್ಲಿ ಕಾಣಿಸದ ಸೀತಾರಾಂ ಮ್ಯಾಜಿಕ್
ನಾನು ಈ ಚಿತ್ರ ನೋಡಿಲ್ಲ. ಹಾಡುಗಳು ಉತ್ತಮವಾಗಿ , ಕೇಳಬಹುದು. "wonderful", "beautiful" ಅಂತ ಬಳಸುವ ಬದಲು ಕನ್ನಡದ ಪದಗಳು ಇದ್ದಿದ್ದರೆ ತುಂಬ ಚನ್ನಗಿರುತ್ತೆ ಅನ್ನಿಸುತ್ತೆ. "ಬಯಸಿ ಬಡತನವ ಪಡೆಯೊದು ಸತ್ಯವಂತರ ಕರ್ಮ " - ಅಂತು ಸೂಪರ್. ನಾನು ಇಷ್ಟಪಟ್ಟು ನೋಡಿದ್ದು "ಮುಖಾ-ಮುಖಿ" ದಾರವಾಹಿ. ಅದಾದ ಮೇಲೆ ಯಾವ ದಾರಾವಾಹಿ ನೋಡಿಲ್ಲ. ಆದರೆ ಟಿ.ಎನ್.ಎಸ್. "dialogue oriented"... ಚಿತ್ರಗಳಿಗೆ ಹೆಚ್ಚು ಒತ್ತು ಕೊಡುತ್ತಾರೆ, ಅದನ್ನು "visually oriented" ಮಾಡಿದರೆ ಇನ್ನು ಚನ್ನಾಗಿರುತ್ತೆ ಅಂತ ನನ್ನ ಅನಿಸಿಕೆ. :)
Post new comment